Dr. Rajkumar – Aa Devara Haadidu Lyrics

ಆ ದೇವರ ಹಾಡಿದು
ನಮ್ಮಂತೆ ಎಂದೂ ಇರದು
ನಗುವಿರಲಿ, ಅಳುವಿರಲಿ
ಅವನಂತೆಯೇ ನಡೆವುದು

ಆ ದೇವರ ಹಾಡಿದು
ನಮ್ಮಂತೆ ಎಂದೂ ಇರದು
ನಗುವಿರಲಿ, ಅಳುವಿರಲಿ
ಅವನಂತೆಯೇ ನಡೆವುದು

ನೋವಲ್ಲೂ ನೂರು ಸುಖವುಂಟು ಇಲ್ಲಿ
ಸುಖದಲ್ಲೂ ನೂರು ನೋವುಂಟು ಇಲ್ಲಿ
ಈ ಕಾಲದ ಕೈಯಲ್ಲಿರೋ ಗಡಿಯಾರವೇ ನಾನು, ನೀನು
ನಡೆಸೋನದೇ ಕೊನೆಯ ಮಾತು

ಆ ದೇವರ ಹಾಡಿದು
ಅದು ಎಂದೋ ಬರೆದಾಗಿಹುದು
ಉಸಿರಿನಲೇ ಹೃದಯಗಳು
ಉಯ್ಯಾಲೆಯಾಗಿರುವುದು

ಕ್ಷಣಕೊಮ್ಮೆ ಸನಿಹ, ಕ್ಷಣಕೊಮ್ಮೆ ವಿರಹ
ಹಣೆ ಮೇಲೆ ಕುಳಿತ ಆ ವಿಧಿಯ ಬರಹ
ಈ ಭೂಮಿಯೇ ಸುರವೀಣೆಯು, ಸ್ವರತಂತಿಯೇ ನಾನು, ನೀನು
ನುಡಿಸೋನದೇ ಕೊನೆಯ ಹಾಡು

ಆ ದೇವರ ಹಾಡಿದು
ಅದು ಎಂದೂ ಬದಲಾಗದು
ಭರವಸೆಯೇ ಹೊಸ ಬೆಳಕು
ನಿಜ ಪ್ರೀತಿ ನಿಯಮ ಇದು

ಆ ದೇವರ ಹಾಡಿದು
ನಮ್ಮಂತೆ ಎಂದೂ ಇರದು
ನಗುವಿರಲಿ, ಅಳುವಿರಲಿ
ಅವನಂತೆಯೇ ನಡೆವುದು
ಅವನಂತೆಯೇ ನಡೆವುದು
ಅವನಂತೆಯೇ ನಡೆವುದು

Comments (0)